   ಮೂಲದೊಡನೆ ಪರಿಶೀಲಿಸಿ

ಓಲಿಫಿನ್ನುಗಳು: ಅಪರ್ಯಾಪ್ತ ಹೈಡ್ರೊಕಾರ್ಬನ್ನುಗಳು, ಅಂದರೆ ಇಂಗಾಲ ಪರಮಾಣುವಿನ ಚತುಸ್ಸಂಯೋಗಶಕ್ತಿ ಸ್ವಾಭಾವಿಕವಾಗಿ ತೃಪ್ತಿಯಾಗದಿರುವ ಸಂಯುಕ್ತಗಳು. ಇವುಗಳಲ್ಲಿ ಒಂದು ದ್ವಿಬಂಧವಿದೆ. ಇವುಗಳ ಕ್ರಿಯಾಶೀಲ ಗ್ರೂಪು (¾ಅ=ಅ¾) ಎಂದಾಯಿತು. ದ್ವಿಬಂಧದ ಇರವು ದೌರ್ಬಲ್ಯದ ಕುರುಹು, ಸಹಜವಾಗಿಯೇ ಇಂಥ ವಸ್ತುಗಳು ಇತರ ವಸ್ತುಗಳನ್ನು ಕೂಡಿಸಿಕೊಂಡು ಪರ್ಯಾಪ್ತಗೊಳಿಸಲು ಹವಣಿಸುತ್ತವೆ. ಪರಿಣಾಮವಾಗಿ ಓಲಿಫಿನ್ನುಗಳು ಕ್ರಿಯಾಶೀಲ ಹೈಡ್ರೋಕಾರ್ಬನ್ನುಗಳು ಎನಿಸಿಕೊಂಡಿವೆ. ಓಲಿಯಂ(ತೈಲ) ಮತ್ತು ಫಿಯಾಂಟ್ (ಜನಕ) ಎಂಬ ಲ್ಯಾಟಿನ್ ಪದಗಳಿಂದ ಓಲಿಫಿನ್ ಹುಟ್ಟಿದೆ. ಕ್ಲೋರಿನ್ ಅಥವಾ ಬ್ರೋಮಿನಿನೊಡನೆ ಈ ವರ್ಗದ ಮೊದಲನೆಯ ಸಂಯುಕ್ತವಾದ ಎಥಿಲೀನ್ ವರ್ತಿಸಿದಾಗ ಎಣ್ಣೆಯಂಥ ವಸ್ತುಗಳು ಉಂಟಾಗುವುದರಿಂದ ಈ ಹೆಸರು ಬರಲು ಕಾರಣವಾಯಿತು.
1949ರಲ್ಲಿ ಆಮ್ಸ್ಟರ್ಡ್ಯಾಂ ನಗರದಲ್ಲಿ ಸಮಾವೇಶಗೊಂಡಿದ್ದ ಅಂತಾರಾಷ್ಟ್ರೀಯ ರಸಾಯನ ವಿಜ್ಞಾನಿಗಳ ಸಮ್ಮೇಳನದಲ್ಲಿ ಕೈಗೊಂಡ ತೀರ್ಮಾನದ ಪ್ರಕಾರ ಈ ಗುಂಪಿನ ಹೈಡ್ರೋಕಾರ್ಬನ್ನುಗಳನ್ನು (ಆಲ್ಕೇನುಗಳು) ಹೆಸರಿನಲ್ಲಿರುವ ಏನ್ ಪ್ರತ್ಯಯದ ಬದಲು ಈನ್ ಪ್ರತ್ಯಯ ಸೇರಿಸಿ ಈ ವರ್ಗದ ಹೈಡ್ರೊಕಾರ್ಬನ್ನುಗಳನ್ನು ಕರೆಯುವುದು ರೂಢಿ. ಉದಾಹರಣೆ¾ 
   ಪ್ಯಾರಫಿನ್  	        ಓಲಿಫಿನ್  
   (ಆಲ್ಕೇನ್) 	        (ಆಲ್ಕೀನ್)
ಅ2ಊ6 ಈಥೇನ್	ಅ2ಊ4 ಈಥೀನ್
ಅ3ಊ8 ಪ್ರೋಪೇನ್	ಅ3ಊ6 ಪ್ರೋಪೀನ್
ಅ4ಊ10 ಬ್ಯೂಟೇನ್ ಇತ್ಯಾದಿ	ಅ4ಊ8 ಬ್ಯೂಟೀನ್ ಇತ್ಯಾದಿ	
ಪ್ಯಾರಾಫಿನ್ನುಗಳ ಸಾರ್ವತ್ರಿಕ ಅಣುಸೂತ್ರ ಅಟಿಊ2ಟಿ+2 ಆಗಿದ್ದರೆ ಓಲಿಫಿನ್ನುಗಳನ್ನು ಅ2ಊ2ಟಿ ಎಂಬ ಸೂತ್ರದಿಂದ ಸೂಚಿಸಬಹುದು. ನೇರಸರಣಿಯಲ್ಲಿರುವ ಇಂಗಾಲದ ಪರಮಾಣುಗಳ ಸಂಖ್ಯೆಗೆ ಅನುಗುಣವಾಗಿ ಆಲ್ಕೀನಿನ ಹೆಸರನ್ನು ನಿರ್ಧರಿಸಲಾಗುವುದು. ದ್ವಿಬಂಧಕ್ಕೆ ಒಳಗಾದ ಎರಡು ಇಂಗಾಲದ ಪರಮಾಣುಗಳ ಕ್ರಮಸಂಖ್ಯೆಗಳ ಪೈಕಿ ಕನಿಷ್ಠ ಸಂಖ್ಯೆಯಿಂದ ದ್ವಿಬಂಧದ ಸ್ಥಾನವನ್ನು ಸೂಚಿಸುವುದು ಪದ್ಧತಿ. ಕೆಳಗಿನ ಉದಾಹರಣೆಗಳಿಂದ ಇದು ಸ್ಪಷ್ಟವಾಗುತ್ತದೆ;
            4     3   2   1
ಅಊ3-ಅಊ3-ಅಊ = ಅಊ2   ಬ್ಯೂಟೀನ್ -1
ಅಊ3-ಅಊ = ಅಊ-ಅಊ3   ಬ್ಯೂಟೀನ್ -2
                     ಅಊ3
1	   2      3  ಳಿ4  5
ಅಊ3- ಅಊ2= ಅ-ಅ-ಅಊ3        3, 4, 4 ಟ್ರೈಮೀಥೈಲ್ ಪೆಂಟೀನ್ -2
              ಳಿ    ಳಿ 
 	          ಅಊ3  ಅಊ3
ಕೆಲವು ಪರಿಚಿತ ಓಲಿಫಿನ್ನುಗಳ ರೂಢಿನಾಮಗಳನ್ನೂ ಅಣುಸೂತ್ರ ಮೊದಲಾದ ವಿವರಗಳನ್ನೂ ಕೆಳಗೆ ಪಟ್ಟಿಮಾಡಲಾಗಿದೆ.
	ಹೆಸರು	ಅಣು	ರಚನಾ	ಕುದಿಯುವ
		ಸೂತ್ರ	ಸೂತ್ರ	ಬಿಂದು 0ಸೆಂ.
ಎಥಿಲೀನ್		              ಅ2ಊ4        ಅಊ2= ಅಊ2		         -103
ಪ್ರೋಪೈಲೀನ್	ಅ3ಊ6	ಅಊ3-ಅಊ= ಅಊ2	 -48
ನಾರ್ಮಲ್ ಬ್ಯುಟಿಲೀನ್	ಅ4ಊ8	ಅಊ3-ಅಊ-ಅಊ= ಅಊ2	-5
ಐಸೊ ಬ್ಯುಟಿಲೀನ್ 	ಅ4ಊ8	ಅಊ3-ಅಊ-ಅಊ= ಅಊ3	-5
ನಾರ್ಮಲ್ ಅಮೈಲೀನ್ 	ಅ5ಊ10	ಅಊ3-ಅಊ2-ಅಊ2-ಅಊ= ಅಊ2	-40
ನಾರ್ಮಲ್ ಹೆಕ್ಸೈಲೀನ್	ಅ6ಊ12	ಅಊ3-ಅಊ2-ಅಊ2-ಅಊ2-ಅಊ = ಅಊ2	-64
ಓಲಿಫಿನ್ನುಗಳನ್ನು ತಯಾರಿಸಲು ರೂಢಿಯಲ್ಲಿರುವ ಸಾರ್ವತ್ರಿಕ ವಿಧಾನಗಳನ್ನು ಮುಂದೆ ವಿವರಿಸಲಾಗಿದೆ.
1 ಆಲ್ಕೊಹಾಲುಗಳ ನಿರ್ಜಲೀಕರಣ: ಇದರ ಸಲುವಾಗಿ ಜಲರಹಿತ ಜಿûಂಕ್ ಕ್ಲೋರೈಡ್, ಪ್ರಬಲ ಸಲ್ಫ್ಯೂರಿಕೆ ಆಮ್ಲ, ಫಾಸ್ಪಾರಿಕ್ ಆಮ್ಲ, ಫಾಸ್ಪರಸ್ ಪೆಂಟಾಕ್ಸೈಡ್, ಅಲ್ಯೂಮಿನಾ (ಂಟ2ಔ3) ಮೊದಲಾದ ನಿರ್ಜಲಕಾರಿಗಳನ್ನು ಬಳಸುವರು. ಈ ಕ್ರಿಯೆಯನ್ನು ಸ್ಥೂಲವಾಗಿ ಕೆಳಕಂಡಂತೆ ಸೂಚಿಸಬಹುದು.
                   ಅಟಿಊ2ಟಿ + 1.ಔಊ  ಅಟಿಊ2ಓ +ಊ2ಔ
              ಆಲ್ಕೊಹಾಲ್             ಓಲಿಫಿನ್
                      ಅ2ಊ5.ಔಊ  ಅ2ಊ4 + ಊ2ಔ
         ಈಥೈಲ್ ಆಲ್ಕೊಹಾಲ್       ಎಥಿಲೀನ್
ಅಲ್ಯೂಮಿನಾ ತುಂಬಿರುವ 3600 ಸೆಂ. ಉಷ್ಣತೆಗೆ ಕಾಯಿಸಿದ ಕೊಳವೆಯ ಮೂಲಕ ಆಲ್ಕೊಹಾಲಿನ ಆವಿಯನ್ನು ಹಾಯಿಸಿದಾಗ, ಗಣನೀಯ ಪ್ರಮಾಣದಲ್ಲಿ ಓಲಿಫಿನ್ ಉತ್ಪತ್ತಿಯಾಗುವುದು ಕಂಡುಬಂದಿದೆ.
2 ಪೊಟ್ಯಾಸಿಯಂ ಹೈಡ್ರಾಕ್ಸೈಡಿನ ಆಲ್ಕೊಹಾಲಿನ ದ್ರಾವಣ ಆಲ್ಕೈಲ್ ಹ್ಯಾಲೈಡುಗಳೊಡನೆ ವರ್ತಿಸಿ ಪಡೆಯಬಹುದು.
ಅಟಿಊ2ಟಿ+ 1ಘಿ +ಏಔಊ  ಅಟಿಊ2ಟಿ+ ಊ20 +ಏx
             (x = ಹ್ಯಾಲೊಜನ್)           ಪೊಟ್ಯಾಸಿಯಂ ಹ್ಯಾಲೈಡ್
ಅ2ಊ5I +ಏಔಊ ಅ2ಊ4 +ಊ20+ಏI
         ಈಥೈಲ್ ಅಯೊಡೈಡ್ 	         ಎಥಿಲೀನ್
ಇದಕ್ಕೆ ಡೀಹೈಡ್ರೊಹ್ಯಾಲೊಜನೇಷನ್ ಕ್ರಿಯೆ ಎನ್ನುವರು,
3 ಜಮ್ಡೈಹ್ಯಾಲೆೃಡುಗಳಿಂದ (ಒಂದೇ ಇಂಗಾಲದ ಪರಮಾಣುವಿಗೆ ಎರಡು ಹ್ಯಾಲೋಜನ್ ಪರಮಾಣುಗಳು ಕೂಡಿರುವುದು) ಅಥವಾ ವಿಸಿನಾಲ್ ಡೈಹ್ಯಾಲೈಡುಗಳಿಂದ (ಅಕ್ಕಪಕ್ಕದ ಇಂಗಾಲದ ಪರಮಾಣುಗಳಿಗೆ ಒಂದೊಂದು ಹ್ಯಾಲೊಜನ್ ಪರಮಾಣು ಕೂಡಿರುವುದು) ಪಡೆಯಬಹುದು.
ಈ ಕ್ರಿಯೆಗೆ ಡೀಹ್ಯಾಲೊಜನೇಷನ್ ಎಂದು ಹೆಸರು.
4 ಪರ್ಯಾಪ್ತ ದ್ವಿಪ್ರತ್ಯಾಮ್ಲೀಯ (ಡೆೈಬೇಸಿಕ್) ಆಮ್ಲಗಳ ಪೊಟ್ಯಾಸಿಯಂ ಲವಣಗಳ ದ್ರಾವಣಗಳನ್ನು ವಿದ್ಯುದ್ವಿಭಜನೆಗೆ ಗುರಿಪಡಿಸಿ ಪಡೆಯಬಹುದು.
ಸಾಮಾನ್ಯ ಗುಣಗಳು: ಅ2- ಅ4 ಹೈಡ್ರೊಕಾರ್ಬನ್ನುಗಳು ಅನಿಲಗಳು, ಅ5- ಅ15 ದ್ರವಗಳು. ಉನ್ನತ ಓಲಿಫಿನ್ನುಗಳು ಘನವಸ್ತುಗಳು. ಇವುಗಳಿಗೆ ಬಣ್ಣವಿಲ್ಲ. ಭೌತಗುಣಗಳಲ್ಲಿ ಪ್ಯಾರಫಿನ್ನುಗಳನ್ನು ಹೋಲುವುವು. ಅವುಗಳಂತೆ ಅಣುತೂಕ ಹೆಚ್ಚಿದಂತೆಲ್ಲ ಸಾಂದ್ರತೆ ದ್ರವೀಕರಣ ಅಥವಾ ಕುದಿಯುವ ಬಿಂದುಗಳಲ್ಲಿ ಕ್ರಮಬದ್ಧವಾದ ವ್ಯತ್ಯಾಸ ತೋರುವುದು. ನೀರಿನಲ್ಲಿ ಅದ್ರಾವ್ಯವೆನ್ನಬಹುದು. ಆಲ್ಕೊಹಾಲ್ ಮತ್ತು ಈಥರಿನಲ್ಲಿ ವಿಲೀನವಾಗುವುವು. ಪ್ರಕಾಶಮಾನವಾದ ಜ್ವಾಲೆಯಿಂದ ಉರಿದು ಗಾಳಿ ಅಥವಾ ಆಕ್ಸಿಜನ್ನಿನೊಡನೆ ಸ್ಪೋಟಕ ಮಿಶ್ರಣ ಕೊಡುತ್ತವೆ. ಅಂತಿಮವಾಗಿ ಇಂಗಾಲದ ಡೈಆಕ್ಸೈಡ್ ಮತ್ತು ನೀರಾಗುವುವು, ದ್ವಿಬಂಧಿತ ಇಂಗಾಲದ ಪರಮಾಣುಗಳಿರುವುದರಿಂದ ಸರಾಗವಾಗಿ ಸಂಯೋಗ ಕ್ರಿಯೆಗಳಲ್ಲಿ ಭಾಗವಹಿಸುತ್ತವೆ. ಕೆಲವು ಮಾದರಿ ಕ್ರಿಯೆಗಳನ್ನು ಮುಂದೆ ಸೂಚಿಸಲಾಗಿದೆ.
1 ಸಮಾಂಗಸಂಯೋಗ (ಸಿಮೆಟ್ರಿಕಲ್ ಅಡಿಶನ್):
(i) ಹೈಡ್ರೊಜನ್ - ಸೂಕ್ಷ್ಮಕಣಗಳ ರೂಪದಲ್ಲಿರುವ ಪ್ಲ್ಯಾಟಿನಂ ಅಥವಾ ಪೆಲೇಡಿಯಂ, ಉನ್ನತ ಉಷ್ಣತೆ ಒತ್ತಡಗಳಲ್ಲಿ ತಾಮ್ರ ಮತ್ತು ಕ್ರೋಮಿಯಂ ಆಕ್ಸೈಡುಗಳ ಮಿಶ್ರಣ, ನಿಕ್ಕಲ್, ಸಾಮಾನ್ಯ ಉಷ್ಣತೆ ಒತ್ತಡಗಳಲ್ಲಿ ರಾಣಿ ನಿಕ್ಕಲ್ ಇದಕ್ಕಾಗಿ ಉಪಯೋಗಿಸುವ ವೇಗ ವರ್ಧಕಗಳು.
			ಊ2
	ಖ-ಅಊ=ಅಊ2      ಖ-ಅಊ2 -ಅಊ3
(ii) ಹ್ಯಾಲೊಜನ್ನುಗಳು ಸಂಯೋಗಲಾಲಿತ್ಯ ಅI>ಃಡಿ>I ಕ್ರಮದಲ್ಲಿದ್ದು ಬೆಳಕು ಅಲ್ಯೂಮಿನಿಯಂ ಅಥವಾ ಫೆರಿಕ್ ಕ್ಲೊರೈಡುಗಳು ಕ್ರಿಯೆಯನ್ನು ಪ್ರಚೋದಿಸುವುವು.
			   ಅI2
	ಅಊ3 -ಅಊ=ಅಊ2     ಅಊ3-ಅಊಅI -ಅಊ2ಅI
ಆದರೆ 4000-6000 ಸೆಂ. ಉಷ್ಣತಾ ಮಿತಿಯಲ್ಲಿ ಆದೇಶಕ್ರಿಯೆ (ಸಬ್ಸ್ಟಿಟ್ಯೂಷನ್ ರಿಆಕ್ಷನ್) ನಡೆದು ಅಲ್ಲೈಲ್ ಕ್ಲೋರೈಡಿನ (ಅI -ಅಊ2-ಅಊ=ಅಊ2) ಅಂಶ ಪ್ರಧಾನವಾಗಿರುವುದು. ದ್ವಿಬಂಧಕ್ಕೆ ಬ್ರೋಮಿನ್ ಕೂಡಿದಾಗ ಬ್ರೋಮಿನ್ ದ್ರಾವಣ ನಿರ್ವರ್ಣವಾಗುವುದು. ದ್ವಿಬಂಧದ ಇರವನ್ನು ಹೀಗೆ ಗುರುತಿಸಬಹುದು. 
(iii) ಓಲಿಫಿನ್ನಿನ ದ್ವಿಬಂಧಕ್ಕೆ ಒಂದು ಓಜೋ಼ನ್ ಅಣು ಕೂಡಿ ಓಜೋ಼ನೈಡುಗಳಾಗುವುವು. ಈ ಕ್ರಿಯೆಯನ್ನು ಕ್ಲೋರೋಫಾರಂ ಅಥವಾ ಕಾರ್ಬನ್ ಟೆಟ್ರಕ್ಲೋರೈಡ್ ಮಾಧ್ಯಮದಲ್ಲಿ ನಡೆಸಬೇಕು.
				ಔ	ಔ

ಇಳಿಸಿದ ಒತ್ತಡದಲ್ಲಿ ಕುದಿಸಿ ಲೀನಕಾರಿಯನ್ನು ತೆಗೆದುಹಾಕಿದ ಅನಂತರ ನೀರು ಮತ್ತು ಸತುವಿನ ಧೂಳನ್ನು ಸೇರಿಸಿದರೆ ಓಜೋ಼ನೈಡ್ ವಿಭಜಿಸಿ ಆಲ್ಡಿಹೈಡ್ ಮತ್ತು ಕೀಟೋನುಗಳನ್ನು ಕೊಡುವುದು.

	ಖ		 ಊ
  ಕೀಟೋನ್	      ಆಲ್ಡಿಹೈಡ್
ಉತ್ಪತ್ತಿಯಾದ ಹೈಡ್ರೋಜನ್ ಪರಾಕ್ಸೈಡನ್ನು ಸತುವಿನ ಧೂಳು ನಾಶಪಡಿಸುತ್ತದೆ. ಇಲ್ಲದಿದ್ದರೆ ಅದು ಆಲ್ಡಿಹೈಡನ್ನು ಆಮ್ಲವಾಗಿ ಉತ್ಕರ್ಷಿಸುವುದು. ಓಲಿಫಿನ್ನಿನ ಇಂಗಾಲದ ಸರಣಿಯಲ್ಲಿ ದ್ವಿಬಂಧವಿದ್ದ ಸ್ಥಾನವನ್ನು ನಿರ್ಧರಿಸಲು ಈ ಕ್ರಿಯೆಗಳು ಸಹಾಯಕವಾಗಿವೆ. 
ಅಸಮಾಂಗ ಸಂಯೋಗ (ಅನ್ಸಿಮೆಟ್ರಿಕಲ್ ಅಡಿಶನ್): 
(i) ಹೈಡ್ರೊಜನ್ ಹ್ಯಾಲೈಡುಗಳು: ಸಂಯೋಗ ಲಾಲಿತ್ಯದ ಕ್ರಮ ಊI>ಊಃಡಿ>ಊಅI. ದ್ವಿಬಂಧಿತ ಪರಮಾಣುಗಳ ಪೈಕಿ ಸಂಖ್ಯೆ ಹೈಡ್ರೊಜನ್ ಪರಮಾಣುಗಳನ್ನು ಹೊಂದಿರುವ ಇಂಗಾಲ ಆಮ್ಲದ ಹೈಡ್ರೋಜನ್ ಭಾಗವನ್ನೂ ಮತ್ತೊಂದು ಇಂಗಾಲ ಹ್ಯಾಲೊಜನ್ ಭಾಗವನ್ನೂ ಕೂಡಿಸಿಕೊಳ್ಳುವುವು. ಇದೇ 1869ರಲ್ಲಿ ಪ್ರತಿಪಾದಿತವಾದ ಮಾರ್ಕೋನಿಕಾಫನ ನಿಯಮ. ಪ್ರೊಪೈಲೀನಿನೊಡನೆ ಹೈಡ್ರೊಜನ್ ಬ್ರೋಮೈಡ್ ವರ್ತಿಸಿದಾಗ ಹೀಗಾಗುತ್ತದೆ.

				
                          ಐಸೋಪ್ರೊಪೈಲ್ ಬೋಮ್ರೈಡ್
ಈ ನಿಯಮ ಪಾಲಿತವಾಗಬೇಕಾದರೆ ಓಲಿಫಿನ್ನಿನ ಅಣುವಿನ ಮಧ್ಯದಲ್ಲಿ ದ್ವಿಬಂಧವಿರಬಾರದು. ಆದರೆ ಆಕ್ಸಿಜನ್ ಅತಿನೇರಳೆ ಕಿರಣಗಳು ಮತ್ತು ಪೆರಾಕ್ಸೈಡುಗಳ ಸಂಪರ್ಕದಲ್ಲಿ ಹೈಡ್ರೊಜನ್ ಬ್ರೋಮೈಡ್ ಮಾತ್ರ ಈ ನಿಯಮಕ್ಕೆ ವಿರೋಧವಾಗಿ ಓಲಿಫಿನ್ನಿಗೆ ಕೊಡುವುದು.

ಇದಕ್ಕೆ ಪರಾಕ್ಸೈಡ್ ಪರಿಣಾಮ ಎಂದು ಹೆಸರು. ಪ್ರಾಯಶಃ ಪರಾಕ್ಸೈಡು ಬಿಡುಗಡೆ ಮಾಡುವ ಬ್ರೋಮಿನಿನ ಅಯಾನು ಪ್ರೊಪೈಲೀನಿನೊಡನೆ ವರ್ತಿಸಿ ಸ್ವತಂತ್ರ ರ್ಯಾಡಿಕಲ್ ನಿರ್ಮಾಣವಾಗುವುದು. ಇದು ಕೆಳಕಂಡ ಸರಪಳಿ ಕ್ರಿಯೆಯನ್ನು ಪ್ರೇರೇಪಿಸುವುದೆಂದು ನಂಬಲಾಗಿದೆ.

          (ಇದು ಕ್ರಿಯೆಯನ್ನು 
          ಪುನರಾವರ್ತಿಸುವುದು)
(ii) ನೀರು ಮತ್ತು ಸಲ್ಫ್ಯೂರಿಕ್ ಆಮ್ಲಗಳು ಸಹ ಮಾರ್ಕೋನಿ ಕಾಫನ ನಿಯಮದ ಅನುಸಾರವಾಗಿಯೇ ಕೂಡುವುವು.
(iii) ಹೈಪೊ ಹ್ಯಾಲಸ್ ಆಮ್ಲಗಳು: ಇವುಗಳ ಹ್ಯಾಲೊಜನ್ ಅಧಿಕ ಸಂಖ್ಯೆ ಹೈಡ್ರೊಜನ್ ಪರಮಾಣುಗಳಿರುವ ದ್ವಿಬಂಧಿತ ಇಂಗಾಲಕ್ಕೆ ಕೊಡುವುದು.

ಉತ್ಕರ್ಷಣ: 90% ಹೈಡ್ರೊಜನ್ ಪೆರಾಕ್ಸೈಡು ಅಸಿಟಿಕ್ ಅಥವಾ ಫಾರ್ಮಿಕ್ ಆಮ್ಲದ ದ್ರಾವಣದಲ್ಲಿ ಎರಡು ಹೈಡ್ರಾಕ್ಸಿಲ್ ಗ್ರೂಪುಗಳನ್ನು ಕೂಡಿಸುವುದು.

				
                              ಗ್ಲೈಕಾಲ್
ತಣ್ಣಗಿರುವ ಕ್ಷಾರ ಮಿಶ್ರಿತ ಪೊಟ್ಯಾಸಿಯಂ ಪಮಾರ್ಯ್‌ಂಗನೇಟು ಓಲಿಫಿನ್ನಿನಿಂದ ನಿರ್ವರ್ಣಗೊಳ್ಳುವುದು. ಆಗಾರ್ಯ್‌ನಿಕ್ ಸಂಯುಕ್ತಗಳ ಅಪರ್ಯಾಪ್ತತೆಯನ್ನು ಹೀಗೆ ಗುರುತಿಸಬಹುದು. ಇದಕ್ಕೆ ಬೇಯರ್ ಪರೀಕ್ಷಾ ಪ್ರಯೋಗ ಎನ್ನುವರು.
 ಖ - ಅಊ = ಅಊ - ಖ + ಊ2ಔ+ [ ಔ ]
		            ¯	     ಪಮಾರ್ಯ್‌ಗನೇಟ್
	              ಖ - ಅಊ -ಅಊ - ಖ'   ಒದಗಿಸಿದ ಆಕ್ಸಿಜನ್
		        |     |
		         ಔಊ   ಔಊ
		       ಗ್ಲೈಕಾಲ್
ಆಮ್ಲಮಿಶ್ರಿತ ಪೊಟ್ಯಾಸಿಯಂ ಪಮಾರ್ಯ್‌ಂಗನೇಟ್ ಅಥವಾ ಡೈಕ್ರೋಮೇಟುಗಳು ದ್ವಿಬಂಧ ಸ್ಥಾನದಲ್ಲಿ ಓಲಿಪಿನ್ನಿನ ಅಣುಛೇದನ ಮಾಡುವುವು.

ಐಸೊಮರೈಸೇಷನ್: ಓಲಿಫಿನ್ನನ್ನು ಏಕಾಂಗಿಯಾಗಿ 5000-7000 ಸೆಂ. ಉಷ್ಣತಾಮಿತಿಯಲ್ಲಿ ಅಥವಾ ಅಲ್ಯೂಮಿನಿಯಂ ಸಲ್ಫೇಟ್ ವೇಗವರ್ಧಕದ ಸಂಪರ್ಕದಲ್ಲಿ 2000-3000 ಸೆಂ. ಉಷ್ಣತಾ ಮಿತಿಯಲ್ಲಿ ಕಾಯಿಸಿದರೆ ರೂಪಾಂತರ ಹೊಂದುವುದು. ದ್ವಿಬಂಧ ಇಂಗಾಲದ ಸರಣಿಯ ಕೇಂದ್ರಕ್ಕೆ ಸರಿಯುವ ಪ್ರವೃತ್ತಿಯಿಂದ ಅಥವಾ ಮೀಥೈಲ್ ಗ್ರೂಪಿನ ಸ್ಥಾನಪಲ್ಲಟದಿಂದ ಹೀಗಾಗಬಹುದೆಂದು ಭಾವಿಸಲಾಗಿದೆ.

     ಪೆಂಟಿನ್-1		ಪೆಂಟಿನ್-2

		ಬ್ಯೂಟಿನ್-1	2-ಮಿಥೈಲ್ಪ್ರೊಪಪೀನ್
ಪೊಲಿಮರೈಸೇಷನ್ (ಅಣುಸಂಘಟನೆ): ಸೂಕ್ತ ಸನ್ನಿವೇಶದಲ್ಲಿ ಓಲಿಫಿನ್ನಿನ ಅಣುಗಳು ಸಂಘಟಿತವಾಗಿ ದೊಡ್ಡ ಅಣುಗಳನ್ನು ಕೊಡುವುವು. ಫಲಿತ ವಸ್ತುವಿನ ಅಂಗಮೂಲಧಾತುಗಳೂ ಅವುಗಳ ತೂಕ ಪ್ರಮಾಣವೂ ಮೂಲ ಓಲಿಫಿನ್ನಿನಂತೆಯೇ ಇದ್ದು ಅಣುತೂಕ ಮಾತ್ರ ವ್ಯತ್ಯಾಸವಾಗಿರುವುದು. ಈ ವಿಶೇಷ ಕ್ರಿಯೆಗೆ ಪೊಲಿಮರೈಸೇಷನ್ ಎಂದು ಹೆಸರು. ಉದಾಹರಣೆಗೆ 3000 ಸೆಂ. ಉಷ್ಣತೆಯಲ್ಲಿ 1,500 ವಾಯುಮಂಡಲ ಒತ್ತಡದಲ್ಲಿ ಅಲ್ಪಪ್ರಮಾಣ ಆಕ್ಸಿಜನ್ನಿನ ಸಂಪರ್ಕದಲ್ಲಿ ದ್ರವಿತ ಎಥಿಲೀನ್ ಪಾಲಿಥೀನ್ ಎಂಬ ಉತ್ತಮ ಪ್ಲಾಸ್ಟಿಕ್ ಆಗುವುದು.
	
	ಟಿ =100-1000 ಆಗಿರಬಹುದು. 1400 ಸೆಂ. ಉಷ್ಣತೆಯಲ್ಲಿ ಮೆದುವಾಗುವ ಈ ಶ್ರೇಷ್ಠ ಪ್ಲಾಸ್ಟಿಕ್ಕಿನಿಂದ ನಾನಾ ತರಹೆಯ ಸೀಸೆಗಳು ಮತ್ತು ಪ್ರಯೋಗಶಾಲೆಯ ಉಪಕರಣಗಳನ್ನು ಮಾಡುತ್ತಿದ್ದಾರೆ. ಇದು ವಿದ್ಯುತ್ ನಿರೋಧಕವಾಗಿಯೂ ಬಳಸಲ್ಪಟುತ್ತಿದೆ. ತಣ್ಣಗಿರುವ ಪ್ರಬಲ ಸಲ್ಫೂರಿಕ್ ಆಮ್ಲದ ಸಂಪರ್ಕದಲ್ಲಿ ಐಸೊ ಬ್ಯುಟಲೀನು ಐಸೊ ಆಕ್ಟೀನಾಗಿ ಪರಿವರ್ತಿತವಾಗುವುದು ಮತ್ತೊಂದು ನಿದರ್ಶನ.

 

ಆಲ್ಕೈಲೇಷನ್: ಆಮ್ಲೀಯ ವೇಗವರ್ಧಕಗಳಾದ ಅಲ್ಯೂಮಿನಿಯಂ ಕ್ಲೋರೈಡ್ ಮತ್ತು ಸಲ್ಫ್ಯೂರಿಕ್ ಆಮ್ಲಗಳ ಸಂಪರ್ಕದಲ್ಲಿ ಉನ್ನತ ಉಷ್ಣತೆ ಒತ್ತಡಗಳಲ್ಲಿ ಆಲ್ಕೇನುಗಳು ದ್ವಿಬಂಧಕ್ಕೆ ಸೇರುವ ಪ್ರಸಂಗವಿದು. ಐಸೊ ಬ್ಯುಟೇನ್ ಮತ್ತು ಐಸೋ ಬ್ಯುಟಲೀನ್ ಪರಸ್ಪರ ಕೂಡಿ ಐಸೊ ಆಕ್ಟೇನ್ ಆಗುವುದು ಇದಕ್ಕೆ ಉದಾಹರಣೆ.
ಉಪಯೋಗಗಳು: ಎಥಿಲೀನಿನಿಂದ ಆಲ್ಕೊಹಾಲ್ ಮತ್ತು ಮಸ್ಟರ್ಡ್ ಅನಿಲಗಳನ್ನು ಮಾಡುವರು. 1000 ಭಾಗ ಗಾಳಿಯಲ್ಲಿ ಒಂದು ಭಾಗ ಎಥಿಲೀನ್ ಇದ್ದರೆ ಸಾಕು. ಸಿಟ್ರಸ್ ವರ್ಗದ ಹಣ್ಣುಗಳು ಬೇಗ ಮಾಗುವುವು. ಆಲೂಗೆಡ್ಡೆಯ ಬೆಳೆವಣಿಗೆಗೆ ಉತ್ತೇಜನಕವಾಗಿದೆ. ಟ್ರೈಕ್ಲೋರೊಎಥಿಲೀನ್ ಎಂಬುದು ಕೊಬ್ಬುಗಳಿಗೆ ಲೀನಕಾರಿ. ಸೋಡಿಯಂ ಟೆಟ್ರಾಸಲ್ಫೈಡ್ (ಓಚಿ2S4) ಮತ್ತು ಎಥಿಲೀನ್ ಕ್ಲೋರೈಡುಗಳ ಸಂಯೋಗದಿಂದ ಥಯೊಕಾಲ್ ಎಂಬ ಕೃತಕ ರಬ್ಬರ್ ಆಗುತ್ತದೆ. ಪಾಲಿಥೀನ್ ಪ್ಲ್ಯಾಸ್ಟಿಕ್ ವಿಷಯ ಆಗಲೇ ಪ್ರಸ್ತಾಪಿಸಲಾಗಿದೆ. ಟೆಟ್ರಫ್ಲೋರೋ ಎಥಿಲೀನಿನಿಂದ (ಅಈ2 = ಅಈ2) ಟೆಫ್ಲಾನ್ (ಅ2ಈ4)ಟಿ ಎಂಬ ಕೃತಕ ನೂಲಾಗುತ್ತದೆ. ಪ್ರೊಪೈಲೀನಿಂದ ಅಸಿಟೋನ್ ಮತ್ತು ಗ್ಲಿಸರಾಲುಗಳನ್ನು ಕೈಗಾರಿಕಾ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ.     (ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ